ರಾಯಚೂರು : ತಲೆಮಾರಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸಲು ರಾಯಚೂರು ಎಸ್‌ಪಿ ನಿಖಿಲ್.ಬಿ ಅವರು ಮೂಲ ಕಾರಣವಾಗಿದ್ದರೆ.


COMMERCIAL BREAK
SCROLL TO CONTINUE READING

ಸ್ಯಾಂಟ್ರೋ ರವಿ ಗುಜರಾತ್ ನಲ್ಲಿರೊದಕ್ಕೆ ಲೀಡ್ ಸಿಕ್ಕಿದ್ದೆ ರಾಯಚೂರು ಪೊಲೀಸರಿಂದ. ಸ್ಯಾಂಟ್ರೋ ರವಿ ಅತ್ಯಾಪ್ತ ಹಾಗೂ ವಕೀಲ ಲಕ್ಷ್ಮೀಶ್ ಚೇತನ್ ಎಂಬುವವ ಮಂತ್ರಾಲಯಕ್ಕೆ ಬಂದಿದ್ದ, ಇದನ್ನು ಖಚಿತ ಪಡಿಸಿಕೊಂಡ ರಾಯಚೂರು ಪೊಲೀಸರು ನಿನ್ನೆಯೇ ಈತನನ್ನು ಬಂಧಿಸಿದ್ದರು.


ಇದನ್ನೂ ಓದಿ : Santro Ravi Arrested : ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಅರೆಸ್ಟ್..!


ಈತನೇ ಸ್ಯಾಂಟ್ರೋ ರವಿ ಗೆ ಜಾಮೀನಿಗೆ ಅರ್ಜಿ ಹಾಕಿದ್ದ. ಈತ ನಿನ್ನೆ ಮಂತ್ರಾಲಯದ ರಾಯರ ದರ್ಶನಕ್ಕೆ ಬಂದಾಗ ರಾಯಚೂರು ಪೊಲೀಸರು ಲಾಕ್ ಮಾಡಿದ್ದರು. ರಾಯಚೂರು ಎಸ್‌ಪಿ ನಿಖಿಲ್.ಬಿ ಅವರು ಆಪರೇಶನ್ ಮಾಡಿ, ಲಕ್ಷ್ಮೀಶ್ ಅಲಿಯಾಸ್ ಚೇತನ್ ವಶಕ್ಕೆ ಪಡೆದು, ಅಸಲಿ ಸತ್ಯವನ್ನು ಬಯಲು ಮಾಡಿದ್ದರು.


ಪೊಲೀಸರು ಕೂಡಲೇ ಆತನಿಂದ ಸ್ಯಾಂಟ್ರೋ ರವಿ ಮಾಹಿತಿ ಕಲೆ ನಂತರ ನಿನ್ನೆಯೇ ಆತನನ್ನ ಮೈಸೂರಿಗೆ ಕರೆದೊಯ್ದಿದ್ದರು. ಇದಾದ ಬಳಿಕವೇ ಸ್ಯಾಂಟ್ರೋ ರವಿ ಬಗ್ಗೆ ಖಚಿತ ಮಾಹಿತಿಯನ್ನ ರಿವೀಲ್ ಮಾಡಿದ್ದ. ಆ ನಂತರ ಸ್ಯಾಂಟ್ರೋ ರವಿಯನ್ನ ಗುಜರಾತ್ ನಲ್ಲಿ ಬಂಧಿಸಲಾಗಿದೆ. 


ಇದನ್ನೂ ಓದಿ : “ಮಾನನಷ್ಟ ಮೊಕದ್ದಮೆ ಕಾನೂನು ಕೇವಲ ಬಿಜೆಪಿಗೆ ಮಾತ್ರ ಸೀಮಿತವೇ?”


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.